Skip to Content

ಪುಟಾಣಿ ಶಿಕ್ಷಕರು, ದೊಡ್ಡ ಪಾಠಗಳು

download

Last Updated On: 15 Nov 2026

Little Teachers, Big Lessons

ಮಕ್ಕಳು ಜಗತ್ತನ್ನು ನೋಡುವ ರೀತಿ ಅದ್ಭುತ. ಅವರು ಮುಕ್ತವಾಗಿ ಪ್ರಶ್ನಿಸುತ್ತಾರೆ, ಮಿತಿಯಿಲ್ಲದೆ ಕನಸು ಕಾಣುತ್ತಾರೆ, ಸಣ್ಣ ವಿಷಯಗಳಲ್ಲಿ ಸಂತೋಷ ಕಂಡುಕೊಳ್ಳುತ್ತಾರೆ ಮತ್ತು ಅಂದುಕೊಂಡಂತೆ ಆಗದಿದ್ದಾಗ ಮತ್ತೆ ಪ್ರಯತ್ನಿಸಲು ಹೆದರುವುದಿಲ್ಲ.

ಬೂಟಿನ ದಾರ ಕಟ್ಟುವುದು, ನಾಣ್ಯ ಎಣಿಸುವುದು, “ಧನ್ಯವಾದ” ಹೇಳುವುದನ್ನು ಕಲಿಸಲು ನಾವು ವರ್ಷಗಳನ್ನು ಕಳೆಯುತ್ತೇವೆ. ಆದರೆ ಗಮನವಿಟ್ಟು ನೋಡಿದರೆ, ಅವರ ಬಳಿಯೂ ನಮಗೆ ಕಲಿಸುವ ಪಾಠಗಳಿವೆ — ಅವುಗಳಲ್ಲಿ ಕೆಲವು ಹಣದ ಬಗ್ಗೆ ನಮ್ಮ ಯೋಚನೆಗೆ ಸುಂದರವಾಗಿ ಹೊಂದಿಕೊಳ್ಳುತ್ತವೆ.

img

ಈ ಮಕ್ಕಳ ದಿನಾಚರಣೆಯಂದು, ನಮ್ಮ ಪುಟಾಣಿ ಶಿಕ್ಷಕರಿಂದ ಕಲಿಯೋಣ. 

01
“ಆದರೆ ಯಾಕೆ?” — ಕುತೂಹಲ ಉಳಿಸಿಕೊಳ್ಳಿ
ಮಕ್ಕಳ ನೆಚ್ಚಿನ ಪ್ರಶ್ನೆ ಹೆಚ್ಚಾಗಿ “ಯಾಕೆ?”, ಒಂದೇ ಉತ್ತರದಿಂದ ಅವರಿಗೆ ತೃಪ್ತಿಯಾಗುವುದು ಅಪರೂಪ.
 
ಹಣದ ಪಾಠ: ಅದೇ ಕುತೂಹಲವನ್ನು ಹೂಡಿಕೆಯಲ್ಲೂ ತೋರಿಸಿ. ಒಂದು ಫಂಡ್ ಏಕೆ ಇದೆ, ಅದು ಯಾವುದರಲ್ಲಿ ಹೂಡಿಕೆ ಮಾಡುತ್ತದೆ, ಅದರಲ್ಲಿ ಯಾವ ರಿಸ್ಕ್‌ಗಳಿವೆ ಮತ್ತು ಅದು ನಿಮ್ಮ ಗುರಿಗಳಿಗೆ ಹೊಂದುತ್ತದೆಯೇ ಎಂದು ಕೇಳಿ. ಹೂಡಿಕೆಗೂ ಮುನ್ನ ಅರ್ಥಮಾಡಿಕೊಳ್ಳುವುದು ಯಾವಾಗಲೂ ಬಲವಾದ ಆರಂಭ.
02
ಹುಂಡಿ — ಸಣ್ಣ ನಾಣ್ಯಗಳೇ ಸೇರಿ ಬೆಳೆಯುತ್ತವೆ
ಹುಂಡಿಗೆ ಹಾಕಿದ ಒಂದು ರೂಪಾಯಿ ನಾಣ್ಯ ಚಿಕ್ಕದೆನಿಸಬಹುದು, ಆದರೆ ಕಾಲಕ್ರಮೇಣ ಆ ಪುಟ್ಟ ಕೊಡುಗೆಗಳು ಮೌನವಾಗಿ ಬೆಳೆಯುತ್ತವೆ.
 
ಹಣದ ಪಾಠ: ಆರಂಭಿಸಲು ದೊಡ್ಡ ಮೊತ್ತ ಬೇಕಿಲ್ಲ. ಸಣ್ಣ, ನಿಯಮಿತ SIPಗಳು, ಸಮಯ ಕೊಟ್ಟರೆ, ಅರ್ಥಪೂರ್ಣ ನಿಧಿಯನ್ನು ರೂಪಿಸಬಲ್ಲವು. ಚಕ್ರಬಡ್ಡಿ (ಕಾಂಪೌಂಡಿಂಗ್) ಅದನ್ನು ಮೌನವಾಗಿ ಹೆಚ್ಚಿಸುತ್ತದೆ.
03
ಸೈಕಲ್ ಓಡಿಸಲು ಕಲಿಯುವುದು — ಬೀಳಿ, ಧೂಳು ಕೊಡವಿ, ಮತ್ತೆ ಪೆಡಲ್ ತುಳಿಯಿರಿ
ತೂರಾಡುವುದು, ಮಂಡಿ ತರಚುವುದು, ಬೀಳುವುದು — ಇವೆಲ್ಲ ಸವಾರಿಯ ಭಾಗ. ಆದರೂ ಮಕ್ಕಳು ಎದ್ದು ಮತ್ತೆ ಪ್ರಯತ್ನಿಸುತ್ತಾರೆ.
 
ಹಣದ ಪಾಠ: ಮಾರುಕಟ್ಟೆಗಳೂ ತೂರಾಡುತ್ತವೆ. ನಿಮ್ಮ ದೀರ್ಘಾವಧಿ ಗುರಿಗಳು, ಹೂಡಿಕೆಯ ಅವಧಿ ಮತ್ತು ರಿಸ್ಕ್ ಸಹಿಸುವ ಸಾಮರ್ಥ್ಯದ ಮೇಲೆ ಗಮನವಿಡುವುದು, ಪ್ರತಿ ಕುಸಿತಕ್ಕೂ ಪ್ರತಿಕ್ರಿಯಿಸದೆ ಏರಿಳಿತಗಳನ್ನು ಎದುರಿಸಲು ನೆರವಾಗುತ್ತದೆ.
04
“ದೊಡ್ಡವರಾದ ಮೇಲೆ…” — ದೊಡ್ಡ ಕನಸು ಕಾಣಿ, ನಂತರ ಯೋಜಿಸಿ
ಮಕ್ಕಳು ನಿರ್ಭಯವಾಗಿ ಕನಸು ಕಾಣುತ್ತಾರೆ — ಗಗನಯಾತ್ರಿ, ವೈದ್ಯರು, ಕ್ರಿಕೆಟಿಗರು ಇತ್ಯಾದಿ ಆಗಬೇಕೆಂದು.
 
ಹಣದ ಪಾಠ: ದೊಡ್ಡ ಕನಸುಗಳಿಗೆ ಆರ್ಥಿಕ ಸಿದ್ಧತೆ ಬೇಕು. ಶಿಕ್ಷಣ, ಕಾಲೇಜು ಅಥವಾ ವಿದೇಶದಲ್ಲಿ ವ್ಯಾಸಂಗ ಯಾವುದೇ ಇರಲಿ, ಗುರಿಯನ್ನು ಗುರುತಿಸುವುದು, ವೆಚ್ಚ ಅಂದಾಜಿಸುವುದು ಮತ್ತು ಬೇಗ ಆರಂಭಿಸುವುದು ಆಕಾಂಕ್ಷೆಗಳನ್ನು ಯೋಜನೆಯಾಗಿ ಬದಲಿಸಲು ನೆರವಾಗುತ್ತದೆ.
05
ಪ್ರತಿ ಆಟಕ್ಕೂ ಗುಂಪು ಬೇಕಿಲ್ಲ — ಸ್ವತಂತ್ರವಾಗಿ ಯೋಚಿಸಿ
ಮಕ್ಕಳು ಯಾವಾಗಲೂ ಗುಂಪನ್ನು ಹಿಂಬಾಲಿಸದೆ, ಹೆಚ್ಚಾಗಿ ತಮಗಿಷ್ಟವಾದುದನ್ನು ಮಾಡುತ್ತಾ ಆನಂದಿಸುತ್ತಾರೆ.
 
ಹಣದ ಪಾಠ: ಹೂಡಿಕೆಯ ಆಯ್ಕೆಗಳು ವೈಯಕ್ತಿಕ. ಜನಪ್ರಿಯತೆ ಎಂದರೆ ಸೂಕ್ತತೆ ಎಂದಲ್ಲ. ನಿಮ್ಮ ನಿರ್ಧಾರಗಳು ನಿಮ್ಮ ವಿಶಿಷ್ಟ ಗುರಿಗಳು ಮತ್ತು ರಿಸ್ಕ್ ಸಹಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸಬೇಕು.
img
ಅವರ ಕನಸುಗಳಲ್ಲಿ ಹೂಡಿಕೆ

ಪೋಷಕರಾಗಿ, ಮಗುವಿನ ಕನಸುಗಳನ್ನು ನನಸಾಗಿಸಲು ಸಿದ್ಧತೆ ಬೇಕು ಎಂಬುದು ನಮಗೆ ತಿಳಿದಿದೆ. ಚಿಂತನಶೀಲ, ಗುರಿ-ಆಧಾರಿತ ಹೂಡಿಕೆ ವಿಧಾನ ನೆರವಾಗಬಹುದು.

HDFC Children’s Fundನ ಪ್ರಮುಖ ವೈಶಿಷ್ಟ್ಯಗಳು ಕೆಳಗಿವೆ

HDFC Children’s Fundನ ಪ್ರಮುಖ ವೈಶಿಷ್ಟ್ಯಗಳು
01
ಮಗುವಿನ ಭವಿಷ್ಯಕ್ಕೆಂದೇ ರೂಪಿಸಲಾಗಿದೆ

ಶಿಕ್ಷಣ ಮತ್ತು ಭವಿಷ್ಯದ ಆಕಾಂಕ್ಷೆಗಳಿಗಾಗಿ ದೀರ್ಘಾವಧಿ ನಿಧಿ ರೂಪಿಸಲು ನೆರವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಪರಿಹಾರ-ಆಧಾರಿತ ಸ್ಕೀಮ್.

02
ವೈವಿಧ್ಯಮಯ ಹೂಡಿಕೆ ವಿಧಾನ

ಈಕ್ವಿಟಿ, ಈಕ್ವಿಟಿ-ಸಂಬಂಧಿತ ಸಾಧನಗಳು, ಡೆಟ್ ಸೆಕ್ಯುರಿಟಿಗಳು ಮತ್ತು ಮನಿ ಮಾರ್ಕೆಟ್ ಸಾಧನಗಳಲ್ಲಿ ಹೂಡಿಕೆ ಮಾಡುತ್ತದೆ — ಸಮತೋಲಿತ ಬೆಳವಣಿಗೆ ಮತ್ತು ಸ್ಥಿರತೆಯ ಗುರಿಯೊಂದಿಗೆ.

03
ಲಾಕ್-ಇನ್ ಮೂಲಕ ಶಿಸ್ತು

ಕನಿಷ್ಠ ಐದು ವರ್ಷಗಳ ಲಾಕ್-ಇನ್ ಅಥವಾ ಮಗು ಪ್ರಾಪ್ತ ವಯಸ್ಸು ತಲುಪುವವರೆಗೆ ಲಾಕ್-ಇನ್ ಇದ್ದು, ದೀರ್ಘಾವಧಿ, ಬದ್ಧ ಹೂಡಿಕೆಗೆ ಉತ್ತೇಜನ ನೀಡುತ್ತದೆ.

04
ದೀರ್ಘ ಮತ್ತು ವಿಶ್ವಾಸಾರ್ಹ ಇತಿಹಾಸ

ಮಾರ್ಚ್ 2001ರಿಂದ ಆರಂಭವಾಗಿ 25 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಫಂಡ್ ವಿವಿಧ ಮಾರುಕಟ್ಟೆ ಚಕ್ರಗಳನ್ನು ಕಂಡಿದೆ.

05
ಸ್ಥಿರ ನಿಧಿ ನಿರ್ಮಾಣಕ್ಕೆ SIP

SIPಗಳ ಮೂಲಕ ಶಿಸ್ತುಬದ್ಧ ಹೂಡಿಕೆಗೆ ಬೆಂಬಲ ನೀಡುತ್ತದೆ; ಪೋಷಕರು ಸಣ್ಣದಾಗಿ ಆರಂಭಿಸಿ ಕಾಲಕ್ರಮೇಣ ನಿರಂತರವಾಗಿ ನಿಧಿ ಬೆಳೆಸಲು ಅನುವು ಮಾಡುತ್ತದೆ.

ದೊಡ್ಡವರಾದ ಮೇಲೆ ನಾವು ಕೆಲವೊಮ್ಮೆ ಮರೆಯುವುದನ್ನು ಬಹುಶಃ ಮಕ್ಕಳು ನೆನಪಿಸುತ್ತಾರೆ: ಕುತೂಹಲ ಉಳಿಸಿಕೊಳ್ಳಿ, ತಾಳ್ಮೆಯಿಂದಿರಿ, ಸ್ವತಂತ್ರವಾಗಿ ಯೋಚಿಸಿ ಮತ್ತು ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ.

ಈ ಮಕ್ಕಳ ದಿನಾಚರಣೆಯಂದು, ನಮ್ಮ ಪುಟಾಣಿ ಶಿಕ್ಷಕರನ್ನು ಮತ್ತು ಅವರು ನಮ್ಮ ಬದುಕಿಗೆ ತರುವ ದೊಡ್ಡ ಪಾಠಗಳನ್ನು ಸಂಭ್ರಮಿಸೋಣ. 

ಏಕೆಂದರೆ ಪ್ರತಿಯೊಂದು ದೊಡ್ಡ ಕನಸೂ ಚಿಂತನಶೀಲ ಆರಂಭಕ್ಕೆ ಅರ್ಹ.

HDFC Children’s Fund

An open ended fund for investment for children having a lock-in for atleast 5 years or till the child attains age of majority (whichever is earlier).

A. SIP Performance^ - Regular Plan - Growth Option

img

Assuming ₹ 10,000 invested systematically on the first Business Day of every month over a period of time. CAGR returns are computed after accounting for the cash flow by using XIRR method (investment internal rate of return) for Regular Plan - Growth Option. The above investment simulation is for illustrative purposes only and should not be construed as a promise on minimum returns and safeguard of capital. SIP - Systematic Investment Plan.

B. Performance^- Regular Plan - Growth Option

NAV as on October 30, 2026. ₹277.917 (per unit)

img4

Common notes for the above table A & B: ^Past Performance may or may not be sustained in future and is not a guarantee of any future returns. HDFC AMC / HDFC MF is not guaranteeing or assuring any returns on investments in this Scheme. *Inception Date: March 02, 2001. The scheme is co-managed by Mr. Chirag Setalvad (Equity Portfolio) (since April 2, 2007) and Mr. Anil Bamboli (Debt Portfolio) (since October 6, 2022). # NIFTY 50 Hybrid Composite Debt 65:35 Index (Total Returns Index). ## Nifty 50 Index (TRI). $ Adjusted for Bonus units declared under the Scheme. N.A. Not Available. The above returns are of Regular Plan – Growth Option. Returns greater than 1 year period are compounded annualized (CAGR). Load is not taken into consideration for computation of performance. Scheme performance may not strictly be comparable with that of its Additional Benchmark in view of balanced nature of the scheme where a portion of scheme’s investments are made in debt instruments. Different Plans viz. Regular Plan and Direct Plan have a different expense structure. The expenses of the Direct Plan under the Scheme will be lower to the extent of the distribution expenses / commission charged in the Regular Plan. Above returns are as on October 30, 2026.

HDFC Children’s Fund
img5

Views expressed above are indicative and should not be construed as investment advice or as a substitute for financial planning. Due to the personal nature of investments, investors are advised to seek professional advice before investing.

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

Stay ahead with our insights

Did you find this interesting?

Your opinion matters - share your thoughts and help us improve.

Yes

No